•  
  •  
  •  
  •  
Index   ವಚನ - 26    Search  
 
ಮಚ್ಚಬೇಡ, ಮರಳಿ ನರಕಕ್ಕೆರಗಿ ಕರ್ಮಕ್ಕೆ ಗುರಿಯಾಗಬೇಡ. ನಿಶ್ಚಿಂತವಾಗಿ ನಿಜದಲ್ಲಿ ಚಿತ್ತವ ಸುಯಿದಾನವ ಮಾಡಿ, ಲಿಂಗದಲ್ಲಿ ಮನವ ಅಚ್ಚೊತ್ತಿದಂತಿರಿಸಿ ಕತ್ತಲೆಯನೆ ಕಳೆದು, ಬಚ್ಚಬರಿಯ ಬೆಳಗಿನೊಳಗೆ ಓಲಾಡಿ ಸುಖಿಯಾಗೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
Transliteration Maccabēḍa, maraḷi narakakkeragi karmakke guriyāgabēḍa. Niścintavāgi nijadalli cittava suyidānava māḍi, liṅgadalli manava accottidantirisi kattaleyane kaḷedu, baccabariya beḷaginoḷage ōlāḍi sukhiyāgendaru nam'ma appaṇṇapriya cennabasavaṇṇa.