ಅಂಗವ ಮರೆದವಂಗೆ ಲಿಂಗದ ಹಂಗೇಕೊ?
ಅರಿವ ಕಂಡವಂಗೆ ಕುರುಹಿನ ಹಂಗೇಕೊ?
ತಾನು ತಾನಾದವಂಗೆ ಧ್ಯಾನದ ಹಂಗೇಕೊ?
ಮನ ಮುಗ್ಧವಾದವಂಗೆ ಮಾನವರ ಹಂಗೇಕೊ?
ಆಸೆಯನಳಿದವಂಗೆ ರೋಷದ ಹಂಗೇಕೊ?
ಕಾಮನ ಸುಟ್ಟವಂಗೆ ಕಳವಳದ ಹಂಗೇಕೊ?
ನಡೆಗೆಟ್ಟವಂಗೆ ನುಡಿಯ ಹಂಗೇಕೊ?
ನಿಶ್ಚಿಂತವಾದವಂಗೆ ಉಚ್ಚರಣೆಯ ಹಂಗೇಕೊ?
ಬಯಲು ಬಯಲಾದವಂಗೆ ಭಾವದ ಹಂಗೇಕೊ?
ತನ್ನ ಮರೆದು ನಿಮ್ಮನರಿದ ಶರಣಂಗೆ ಅಲ್ಲಿಯೆ ಐಕ್ಯ ಕಂಡೆಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Aṅgava maredavaṅge liṅgada haṅgēko?
Ariva kaṇḍavaṅge kuruhina haṅgēko?
Tānu tānādavaṅge dhyānada haṅgēko?
Mana mugdhavādavaṅge mānavara haṅgēko?
Āseyanaḷidavaṅge rōṣada haṅgēko?
Kāmana suṭṭavaṅge kaḷavaḷada haṅgēko?
Naḍegeṭṭavaṅge nuḍiya haṅgēko?
Niścintavādavaṅge uccaraṇeya haṅgēko?
Bayalu bayalādavaṅge bhāvada haṅgēko?
Tanna maredu nim'manarida śaraṇaṅge alliye aikya kaṇḍeyā
appaṇṇapriya cennabasavaṇṇā.