ಅಯ್ಯಾ, ಕಿಚ್ಚಿನೊಳಗೆ ಬೆಂದ ಕಾಯಕ್ಕೆ ಅಚ್ಚುಗವುಂಟೆ?
ತಾನು ತಾನಾದ ಬಳಿಕ ಮಾನವರ ಹಂಗುಂಟೆ?
ಮನವು ಮಹದಲ್ಲಿ ನಿಂದ ಬಳಿಕ ಮರವೆಯುಂಟೆ?
ತನುವ ಮರೆದಂಗೆ ಇನ್ನರಿಯಬೇಕೆಂಬ ಅರುಹುಂಟೆ?
ಬೆಳಗ ಕಂಡವಂಗೆ ಕತ್ತಲೆಯ ಹಂಗುಂಟೆ?
ಇವೆಲ್ಲವನು ಹಿಂಗಿ ಮಹಾಘನದಲ್ಲಿ ಬೆರೆದ ಶರಣಂಗೆ
ನಮೋ ನಮೋ ಎಂದು ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Ayyā, kiccinoḷage benda kāyakke accugavuṇṭe?
Tānu tānāda baḷika mānavara haṅguṇṭe?
Manavu mahadalli ninda baḷika maraveyuṇṭe?
Tanuva maredaṅge innariyabēkemba aruhuṇṭe?
Beḷaga kaṇḍavaṅge kattaleya haṅguṇṭe?
Ivellavanu hiṅgi mahāghanadalli bereda śaraṇaṅge
namō namō endu sukhiyādenayyā
appaṇṇapriya cennabasavaṇṇā.