•  
  •  
  •  
  •  
Index   ವಚನ - 32    Search  
 
ಮಾಣಿಕವ ಕಂಡವರು ತೋರುವರೆ ಅಯ್ಯಾ, ಮುತ್ತ ಕಂಡವರು ಅಪ್ಪಿಕೊಂಬರಲ್ಲದೆ? ಬಿಚ್ಚಿ ಬಿಚ್ಚಿ ತೋರುವರೆ ಅಯ್ಯಾ, ಆ ಮುತ್ತಿನ ನೆಲೆಯನು, ಮಾಣಿಕದ ಬೆಲೆಯನು? ಬಿಚ್ಚಿ ಬೇರಾಗಿ ತೋರಿ ರಕ್ಷಣೆಯ ಮಾಡಿದ ಕಾರಣದಿಂದ ಬಚ್ಚಬರಿಯ ಬೆಳಗಿನೊಳಗೋಲಾಡಿ ನಿಮ್ಮ ಪಾದದೊಳಗೆ ನಿಜಮುಕ್ತಳಾದೆನಯ್ಯಾ, ಚೆನ್ನಮಲ್ಲೇಶ್ವರ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Māṇikava kaṇḍavaru tōruvare ayyā, mutta kaṇḍavaru appikombarallade? Bicci bicci tōruvare ayyā, ā muttina neleyanu, māṇikada beleyanu? Bicci bērāgi tōri rakṣaṇeya māḍida kāraṇadinda baccabariya beḷaginoḷagōlāḍi nim'ma pādadoḷage nijamuktaḷādenayyā, cennamallēśvara appaṇṇapriya cennabasavaṇṇā.