•  
  •  
  •  
  •  
Index   ವಚನ - 44    Search  
 
ಆಸೆಯುಳ್ಳನ್ನಕ್ಕ ರೋಷ ಬಿಡದು ಕಾಮವುಳ್ಳನ್ನಕ್ಕ ಕಳವಳ ಬಿಡದು ಕಾಯಗುಣವುಳ್ಳನ್ನಕ್ಕ ಜೀವನ ಬುದ್ಧಿ ಬಿಡದು; ಭಾವವುಳ್ಳನ್ನಕ್ಕ ಬಯಕೆ ಸವೆಯದು; ನಡೆಯುಳ್ಳನ್ನಕ್ಕ ನುಡಿಗೆಡದು. ಇವೆಲ್ಲವು ಮುಂದಾಗಿದ್ದು ಹಿಂದನರಿದೆನೆಂಬ ಸಂದೇಹಿಗಳಿರಾ, ನೀವು ಕೇಳಿರೋ. ನಮ್ಮ ಶರಣರು ಹಿಂದ ಹೇಗೆ ಅರಿದರೆಂದಡೆ; ಆಸೆಯನಳಿದರು, ರೋಷವ ಹಿಂಗಿದರು, ಕಾಮನ ಸುಟ್ಟರು, ಕಳವಳವ ಹಿಂಗಿದರು, ಕಾಯಗುಣವಳಿದರು, ಜೀವನ ಬುದ್ಧಿಯ ಹಿಂಗಿದರು, ಭಾವವ ಬಯಲುಮಾಡಿದರು, ಬಯಕೆಯ ಸವೆದರು. ಹಿಂದನರಿದು ಮುಂದೆ ಲಿಂಗವೆ ಗೂಡಾದ ಶರಣರ ಈ ಸಂದೇಹಿಗಳೆತ್ತ ಬಲ್ಲರು, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Āseyuḷḷannakka rōṣa biḍadu kāmavuḷḷannakka kaḷavaḷa biḍadu kāyaguṇavuḷḷannakka jīvana bud'dhi biḍadu; bhāvavuḷḷannakka bayake saveyadu; naḍeyuḷḷannakka nuḍigeḍadu. Ivellavu mundāgiddu hindanaridenemba sandēhigaḷirā, nīvu kēḷirō. Nam'ma śaraṇaru hinda hēge aridarendaḍe; āseyanaḷidaru, rōṣava hiṅgidaru, kāmana suṭṭaru, kaḷavaḷava hiṅgidaru, kāyaguṇavaḷidaru, jīvana bud'dhiya hiṅgidaru, bhāvava bayalumāḍidaru, bayakeya savedaru. Hindanaridu munde liṅgave gūḍāda śaraṇara ī sandēhigaḷetta ballaru, appaṇṇapriya cennabasavaṇṇā.