•  
  •  
  •  
  •  
Index   ವಚನ - 45    Search  
 
ಉಸುರ ಉನ್ಮನಿಗಿತ್ತು, ಶಶಿರವಿಯೊಡಗೂಡಿ, ಕುಶಲವ ತಿಳಿದು, ಮಿಶ್ರವನರಿದು, ಎಸಗಿದ ಮಹಾಬೆಳಗಿನೊಳಗೆ ಹೆಜ್ಜೆವಿಡಿದು ಹೋಗಿ ಅಜನ ಕಂಡೆ. ಅಜನ ಮಗಳ ಸಂಗವ ಮಾಡಲೊಡನೆ ಅಂಗಗುಣವಳಿಯಿತ್ತು. ಕಂಗಳ ಜಮಕಿ ಹಿಂಗಿತ್ತು; ಸಂಗಸಂಯೋಗವಾಯಿತ್ತು. ಮಂಗಳದ ಮಹಾಬೆಳಗಿನೊಳಗೆ ಅಜಗೆ ಅಳಿಯನಾಗಿ, ಅಜ್ಜಗೆ ಮೊಮ್ಮಗನಾಗಿ,ಒಮ್ಮನವಾಗಿ ಪರಬೊಮ್ಮನೆಯಾಗಿ ಆಡುವ ಶರಣ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
Transliteration Usura unmanigittu, śaśiraviyoḍagūḍi, kuśalava tiḷidu, miśravanaridu, esagida mahābeḷaginoḷage hejjeviḍidu hōgi ajana kaṇḍe. Ajana magaḷa saṅgava māḍaloḍane aṅgaguṇavaḷiyittu. Kaṅgaḷa jamaki hiṅgittu; saṅgasanyōgavāyittu. Maṅgaḷada mahābeḷaginoḷage ajage aḷiyanāgi, ajjage mom'maganāgi,om'manavāgi parabom'maneyāgi āḍuva śaraṇa nam'ma appaṇṇapriya cennabasavaṇṇa tāne nōḍā.