ನಿಷ್ಠೆಯೆಂಬುದನೊಂದ ತೋರಿ
ಇಷ್ಟಪ್ರಾಣಭಾವದಲ್ಲಿ ಕಷ್ಟವನಳಿದೆನಯ್ಯ.
ಕಾಯದ ಸಂಗವಳಿದು ಕಾಮನಿಃಕಾಮವಾಗಿ ನಿಂದೆನಯ್ಯ.
ಅನುಭವ ಸುಖವಳಿದು ಅಪ್ರತಿಮ ಇರವ
ಕಂಡು ಬದುಕಿದೆನಯ್ಯ,
ಸಂಗಯ್ಯ ಬಸವನಡಗಿದ ಕಾರಣ
ಕಾಯವನಾನಳಿದೆನು.
Transliteration Niṣṭheyembudanonda tōri
iṣṭaprāṇabhāvadalli kaṣṭavanaḷidenayya.
Kāyada saṅgavaḷidu kāmaniḥkāmavāgi nindenayya.
Anubhava sukhavaḷidu apratima irava
kaṇḍu badukidenayya,
saṅgayya basavanaḍagida kāraṇa
kāyavanānaḷidenu.