•  
  •  
  •  
  •  
Index   ವಚನ - 169    Search  
 
ಪರಶಿವನು ಸುಖಮಯನು, ಸುಖಾತ್ಮನು, ಸುಖಸ್ವರೂಪನು, ನಿಷ್ಕಳನಿರೂಪನು, ಅಪ್ರಮೇಯನು, ಅನಾಮಯನು, ಪರಾತ್ಪರನು, ಅತಿಸೂಕ್ಷ್ಮನು, ಮಹಾಸ್ಥೂಲನು. ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಮ್ ಅನಿಂದಿತಮಾನೌಪಮ್ಯಮಪ್ರಮೇಯಮನಾಮಯಮ್ ಶುದ್ಧತ್ವಾಚ್ಚಿವಮುದ್ದಿಷ್ಟಂ ಪರಾದೂರ್ಧ್ವಂ ಪರಾತ್ಪರಮ್ ಎಂದುದಾಗಿ, `ಅಣೋರಣೀಯಾನ್ ಮಹತೋ ಮಹೀಯಾನ್ʼ ಎಂದುದಾಗಿ, ಇಂತಹ ಶಿವನು ಭಕ್ತಕಾಯನಾಗಿ ಭಕ್ತವತ್ಸಲನಾಗಿಪ್ಪ ಕಾಣಿರೋ. ಅಕಾಯೋ ಭಕ್ತಕಾಯಸ್ತು ಮಮ ಕಾಯಸ್ತು ಭಕ್ತಿಮಾನ್| ಭಕ್ತಸಂಗವಿಶೇಷಣ ಅವಿಕಾರಂ ಶಿವಾತ್ಮನೋಃ ಎಂದುದಾಗಿ, ಸದ್ಭಕ್ತಿಯುಳ್ಳ ಮಹಾಲಿಂಗವಂತಂಗೆ ಪ್ರಾಣವಾಗಿಪ್ಪ ಕಾಣಿರೋ. ಲಿಂಗಾಲಿಂಗೀ ಮಮ ಪ್ರಾಣೋ ಲಿಂಗಾಲಿಂಗೀ ಮಮಾತ್ಮಭೂಃ ಲಿಂಗಾಲಿಂಗೀ ಮಮೋಜ್ಜೀವೀ ಲಿಂಗಾಲಿಂಗೀ ಚ ರಕ್ಷಕಃ ಎಂದುದಾಗಿ, ಇಂತಹ ಭಕ್ತನ ಜಿಹ್ವೆಯಲ್ಲಿ ಆರೋಗಣೆಯ ಮಾಡಿ ಸುಖಿಸುವನು. 'ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ ಸ್ವೀಕೃತಂ ಮಯಾ ರಸಂ ಭಕ್ತಸ್ಯ ಜಿಹ್ವಯಾ ಆಶ್ನಾಮಿ ಕಮಲೋದ್ಭವ' ಇಂತೆಂದುದಾಗಿ, ಈ ಪರಿ ಶಿವಂಗೆ ಸದ್ಭಕ್ತನೇ ದೇಹ, ಸದ್ಭಕ್ತನೇ ಪ್ರಾಣ, ಭಕ್ತನ ಜಿಹ್ವೆಯಲ್ಲಿ ಆರೋಗಿಸುವನು. ಇದು ಕಾರಣ, ಸದ್ಭಕ್ತಂಗೆ ಮಾಡಿದುದೆಲ್ಲವು ಶಿವಂಗೆ ಮಾಡಿದುದು, ಶಿವಂಗೆ ಪ್ರೀತಿ. ಇದು ಕಾರಣ, ಸದ್ಭಕ್ತಂಗೆ ಶರಣೆಂದು ಅರ್ಚಿಸಿ ಪೂಜಿಸಿ ಆರೋಗಿಸಲಿತ್ತು ಪ್ರಸನ್ನತೆಯ ಪಡೆದು ಆ ಪ್ರಸಾದವಂ ಕೊಂಡು ಪರಿಣಾಮಿಯಪ್ಪುದು ಸುಖಿಯಪ್ಪುದು ಭಕ್ತನಪ್ಪುದಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Paraśivanu sukhamayanu, sukhātmanu, sukhasvarūpanu, niṣkaḷanirūpanu, apramēyanu, anāmayanu, parātparanu, atisūkṣmanu, mahāsthūlanu. Śivaṁ parātparaṁ sūkṣmaṁ nityaṁ sarvagatāvyayam aninditamānaupamyamapramēyamanāmayam śud'dhatvāccivamuddiṣṭaṁ parādūrdhvaṁ parātparam endudāgi, `aṇōraṇīyān mahatō mahīyānʼ endudāgi, intaha śivanu bhaktakāyanāgi bhaktavatsalanāgippa kāṇirō. Akāyō bhaktakāyastu mama kāyastu bhaktimān| bhaktasaṅgaviśēṣaṇa avikāraṁ śivātmanōḥ endudāgi, sadbhaktiyuḷḷa mahāliṅgavantaṅge prāṇavāgippa kāṇirō.Liṅgāliṅgī mama prāṇō liṅgāliṅgī mamātmabhūḥ liṅgāliṅgī mamōjjīvī liṅgāliṅgī ca rakṣakaḥ endudāgi, intaha bhaktana jihveyalli ārōgaṇeya māḍi sukhisuvanu. 'Naivēdyaṁ puratō n'yastaṁ darśanāt svīkr̥taṁ mayā rasaṁ bhaktasya jihvayā āśnāmi kamalōdbhava' intendudāgi, ī pari śivaṅge sadbhaktanē dēha, sadbhaktanē prāṇa, bhaktana jihveyalli ārōgisuvanu. Idu kāraṇa, Sadbhaktaṅge māḍidudellavu śivaṅge māḍidudu, śivaṅge prīti. Idu kāraṇa, sadbhaktaṅge śaraṇendu arcisi pūjisi ārōgisalittu prasannateya paḍedu ā prasādavaṁ koṇḍu pariṇāmiyappudu sukhiyappudu bhaktanappudayyā uriliṅgapeddipriya viśvēśvarā.