•  
  •  
  •  
  •  
Index   ವಚನ - 65    Search  
 
ತತ್ವಂಗಳ ಹೊತ್ತು ವಿಸ್ತರಿಸಿ ಸ್ಥಲಂಗಳನಾಧರಿಸಿ ನಾನಾ ಭೇದಂಗಳಲ್ಲಿ ಹೊಕ್ಕು ವೇಧಿಸಿಹೆನೆಂದಡೂ, ಕಾಯ ಕರ್ಮವ ಅನುಭವಿಸುವುದ ಕಂಡು, ಜೀವ ನಾನಾ ಭವಂಗಳಲ್ಲಿ ಬರುತ್ತಿಹುದ ನೋಡಿ, ಇನ್ನಾವುದ ಶ್ರುತದಲ್ಲಿ ಕೇಳಲೇತಕ್ಕೆ? ಇನ್ನಾವುದ ಇದಿರಿಟ್ಟು ದೃಷ್ಟವ ನೋಡಲೇತಕ್ಕೆ? ಇನ್ನಾವ ಮನುವಿಂದ ಅನುಮಾನವನರಿಯಲೇತಕ್ಕೆ? ಹಿಡಿದುದ ಬಿಡದೆ ಬಿಟ್ಟುದ ಹಿಡಿಯದೆ ಉಭಯದ ಒಳಗು ನಿರಿಯಾಣವಾದಲ್ಲಿ ತಾ ನಾಶನ ಸದ್ಯೋಜಾತಲಿಂಗವು ವಿನಾಶನ.
Transliteration Tatvaṅgaḷa hottu vistarisi sthalaṅgaḷanādharisi nānā bhēdaṅgaḷalli hokku vēdhisihenendaḍū, kāya karmava anubhavisuvuda kaṇḍu, jīva nānā bhavaṅgaḷalli baruttihuda nōḍi, innāvuda śrutadalli kēḷalētakke? Innāvuda idiriṭṭu dr̥ṣṭava nōḍalētakke? Innāva manuvinda anumānavanariyalētakke? Hiḍiduda biḍade biṭṭuda hiḍiyade ubhayada oḷagu niriyāṇavādalli tā nāśana sadyōjātaliṅgavu vināśana.