•  
  •  
  •  
  •  
Index   ವಚನ - 66    Search  
 
ಪೂರ್ವದಿಂದ ಉತ್ತರಕ್ಕೆ ಬಂದ ಸೂರ್ಯನು ಅಸ್ತಮಯವಾಯಿತ್ತೆಂದು ಜಾಹ್ಯಗೆ ಒಡಲಾಗಿ, ಮತ್ತಾ ವರುಣಪ್ರದಕ್ಷಿಣದಿಂದ ಬಂದು ಪೂರ್ವದಲ್ಲಿ ಹುಟ್ಟಲಿಕ್ಕೆ ನಿನ್ನಿಂಗೆ ಇಂದಿಂಗೆಯೆಂಬುದು ಒಂದೊ ಎರಡೊ? ಅಂದಿಗೆ ಜ್ಞಾನ, ಇಂದಿಗೆ ಮರವೆ, ಎಂಬುದು ಒಂದೊ ಎರಡೊ? ಅದು ಘಟದ ಪ್ರವೇಶದಿಂದ. ಪೂರ್ವ ಉತ್ತರಕ್ಕೆ ಬಂದಾತ್ಮನನರಿದು ಉಭಯವ ತಿಳಿದು ಸಂದು ನಾಶನವಾದಲ್ಲಿ ಸದ್ಯೋಜಾತಲಿಂಗವು ವಿನಾಶವಾದ.
Transliteration Pūrvadinda uttarakke banda sūryanu astamayavāyittendu jāhyage oḍalāgi, mattā varuṇapradakṣiṇadinda bandu pūrvadalli huṭṭalikke ninniṅge indiṅgeyembudu ondo eraḍo? Andige jñāna, indige marave, embudu ondo eraḍo? Adu ghaṭada pravēśadinda. Pūrva uttarakke bandātmananaridu ubhayava tiḷidu sandu nāśanavādalli sadyōjātaliṅgavu vināśavāda.