ನಲ್ಲನೊಲ್ಲನೆಂದು ಮುನಿದು ನಾನಡಗಲು
ಅಡಗುವ ಎಡೆಯೆಲ್ಲಾ ತಾನೆ, ನೋಡೆಲಗವ್ವಾ.
ನಲ್ಲ ನೀನಿಲ್ಲದೆಡೆಯಿಲ್ಲ.
ಅಡಗಲಿಕಿಂಬಿಲ್ಲಾಗಿ ಮುನಿದು ನಾನೇಗುವೆನು?
ಶರಣುಗತಿವೋಗುವೆನು ಉರಿಲಿಂಗದೇವನ.
Transliteration Nallanollanendu munidu nānaḍagalu
aḍaguva eḍeyellā tāne, nōḍelagavvā.
Nalla nīnilladeḍeyilla.
Aḍagalikimbillāgi munidu nānēguvenu?
Śaraṇugativōguvenu uriliṅgadēvana