ಏರಿದ ವಾಜಿ ಓಹೋ ಎಂದು ಕರೆದೋರಿದಲ್ಲಿ
ನಿಂದಿತ್ತು ವಾಹನ ವಾಹಕನ ಹೃದಯವನರಿತು.
ವಸ್ತುವ ಮುಟ್ಟಿ ಆಡುವ ಚಿತ್ತ
ನಿಜವಸ್ತುವಿನ ಗೊತ್ತನರಿಯದೆ
ತನ್ನ ಇಚ್ಛೆಯಲ್ಲಿ ಹರಿದಾಡುತ್ತಿದೆ ನೋಡಾ!
ಇದಕ್ಕೆ ಒಂದು ಕಟ್ಟಣೆಯ ಗೊತ್ತ ಲಕ್ಷಿಸಿ
ಕಟ್ಟುವಡೆವಂತೆ ಮಾಡು
ಗೋಪತಿನಾಥ ವಿಶ್ವೇಶ್ವರಲಿಂಗ.
Transliteration Ērida vāji ōhō endu karedōridalli
nindittu vāhana vāhakana hr̥dayavanaritu.
Vastuva muṭṭi āḍuva citta
nijavastuvina gottanariyade
tanna iccheyalli haridāḍuttide nōḍā!
Idakke ondu kaṭṭaṇeya gotta lakṣisi
kaṭṭuvaḍevante māḍu
gōpatinātha viśvēśvaraliṅga.