ಕರೆವ ಹಸುವ ಉಳುವ ಬೆನ್ನತ್ತ
ಮೊಲೆವುಂಬ ಕರುವ
ಕುರುಹನರಿಯದೆ ಕಾಯಬಹುದೆ,
ಈ ತ್ರಿವಿಧವಿಲ್ಲದೆ ಗುರುವಿನ ಇರವ
ಲಿಂಗದ ಮೂರ್ತಿಧ್ಯಾನವ
ಅರಿವಿನ ಮರೆದೊರಗುವ ಕಲೆಯ
ಚಲನೆ ನಿಂದಲ್ಲಿ ಆತ್ಮಲಿಂಗ ಭೇದ,
ಪ್ರಾಣ ಸಂಬಂಧವಪ್ಪುದು.
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ ಇದೇ ಪ್ರಮಾಣು.
Transliteration Kareva hasuva uḷuva bennatta
molevumba karuva
kuruhanariyade kāyabahude,
ī trividhavillade guruvina irava
liṅgada mūrtidhyānava
arivina maredoraguva kaleya
calane nindalli ātmaliṅga bhēda,
prāṇa sambandhavappudu.
Gōpatinātha viśvēśvaraliṅgavanarivudakke idē pramāṇu.