ಹಸುವ ಕಾವಲ್ಲಿ ದೆಸೆಯನರಿತು,
ಎತ್ತ ಕಾವಲ್ಲಿ ಪೃಥ್ವಿಯನರಿದು,
ಕರುವ ಕಟ್ಟುವಲ್ಲಿ ಗೊತ್ತ ಕಂಡು
ದನವ ಕಾವಲ್ಲಿ ಸಜ್ಜನನಾಗಿ,
ಜೀವಧನವ ಕಂಡಲ್ಲಿ ಮನ ಮುಟ್ಟದೆ,
ಇಂತೀ ಭೇದೇಂದ್ರಿಯಂಗಳ ತುರುಮಂದೆಯಲ್ಲಿ
ಕರು ಕಡಸು ಎತ್ತು ಹಸುವಿನಲ್ಲಿ
ಚಿತ್ರದ ವರ್ಣವನರಿಯಬೇಕು
ಗೋಪತಿನಾಥ ವಿಶ್ವೇಶ್ವರಲಿಂಗವನರಿವುದಕ್ಕೆ.
Transliteration Hasuva kāvalli deseyanaritu,
etta kāvalli pr̥thviyanaridu,
karuva kaṭṭuvalli gotta kaṇḍu
danava kāvalli sajjananāgi,
jīvadhanava kaṇḍalli mana muṭṭade,
intī bhēdēndriyaṅgaḷa turumandeyalli
karu kaḍasu ettu hasuvinalli
citrada varṇavanariyabēku
gōpatinātha viśvēśvaraliṅgavanarivudakke.