ಹಸುವಿಂಗೆ ಆರು ಬಾಯಿ, ಎತ್ತಿಂಗೆ ಮೂರು ಬಾಯಿ
ಕರುವಿಂಗೆ ಒಂದು ಬಾಯಲ್ಲಿ
ನಾನಾವರ್ಣದ ಹುಲ್ಲ ಮೇದು
ನೀರಡಸಿ ನೆಟ್ಟಾಲಿ ನಿಂದುವು ಕಣ್ಣು.
ಕರು ಸತ್ತ ಮತ್ತೆ ಹಸುವಿನ ಹಂಗಿಲ್ಲ.
ಗೋಪತಿನಾಥ ವಿಶ್ವೇಶ್ವರಲಿಂಗಕ್ಕೆ
ಕರುವಿನ ಹರಣ ಹೋಹುದಕ್ಕೆ ಮುನ್ನವೆ
ಒಡಗೂಡಿ ಶುದ್ಧಿಯನೊಪ್ಪಿಸಬೇಕು.
Transliteration Hasuviṅge āru bāyi, ettiṅge mūru bāyi
karuviṅge ondu bāyalli
nānāvarṇada hulla mēdu
nīraḍasi neṭṭāli ninduvu kaṇṇu.
Karu satta matte hasuvina haṅgilla.
Gōpatinātha viśvēśvaraliṅgakke
karuvina haraṇa hōhudakke munnave
oḍagūḍi śud'dhiyanoppisabēku.