ಉರಿಯ ಗಿರಿಯಲ್ಲಿ ಕರ್ಪುರದ
ತರು ಹುಟ್ಟಿ, ಉರಿ ನಷ್ಟವಾಗಿ,
ಆ ತರುವಿನಲ್ಲಿ ಬೆಂಕಿಯ ಹಣ್ಣು ಹುಟ್ಟಿ,
ಅಪ್ಪುವಿನ ಪಕ್ಷಿ ಬಂದು ಮೆಟ್ಟಿ ಕುಟುಕಲಾಗಿ,
ಆ ಹಣ್ಣಿನ ತೊಟ್ಟಿನೊಳಡಗಿತ್ತು ಹಕ್ಕಿ.
ಮಧುಕೇಶ್ವರಲಿಂಗ ಎತ್ತ ಹೋದನೆಂದರಿಯೆ.
Transliteration Uriya giriyalli karpurada
taru huṭṭi, uri naṣṭavāgi,
ā taruvinalli beṅkiya haṇṇu huṭṭi,
appuvina pakṣi bandu meṭṭi kuṭukalāgi,
ā haṇṇina toṭṭinoḷaḍagittu hakki.
Madhukēśvaraliṅga etta hōdanendariye.