•  
  •  
  •  
  •  
Index   ವಚನ - 65    Search  
 
ಭಕ್ತನ ಕ್ರೀ, ಮಾಹೇಶ್ವರನ ನಿಶ್ಚಯ, ಪ್ರಸಾದಿಯ ನಿಷ್ಠೆ, ಪ್ರಾಣಲಿಂಗಿಯ ಯೋಗ, ಶರಣನ ನಿಬ್ಬೆರಗು, ಐಕ್ಯದ ನಿರ್ಲೇಪ. ಇಂತೀ ಆರುಸ್ಥಲವನವಗವಿಸಿ ಕಲೆದೋರದೆ ನಿಂದುದು ವಿರಕ್ತನ ಏಕಸ್ಥಲದಾಟ, ನಿಜತತ್ವದ ಕೂಟ! ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
Transliteration Bhaktana krī, māhēśvarana niścaya, prasādiya niṣṭhe, prāṇaliṅgiya yōga, śaraṇana nibberagu, aikyada nirlēpa. Intī ārusthalavanavagavisi kaledōrade nindudu viraktana ēkasthaladāṭa, nijatatvada kūṭa! Śambhuvininditta svayambhuvinindatta atibaḷa nōḍā, mātuḷaṅga madhukēśvaranu.