•  
  •  
  •  
  •  
Index   ವಚನ - 66    Search  
 
ಭಕ್ತ ಮಾಹೇಶ್ವರ ಪ್ರಸಾದಿ ಈ ತ್ರಿವಿಧ ಒಂದೆ ಬೀಜ; ತಲೆವಿಡಿಯಿಲ್ಲ. ಪ್ರಾಣಲಿಂಗಿ ಶರಣ ಐಕ್ಯ ಇಂತೀ ತ್ರಿವಿಧ ಒಂದೇ ಬೀಜ; ತಲೆವಿಡಿಯಿಲ್ಲ. ವಸ್ತು-ವಸ್ತುಕದಂತೆ, ಶಿಲೆ-ಕಾಂತಿಯಂತೆ, ಕುಸುಮ-ಗಂಧದಂತೆ, ಪತಿ-ಸತಿಯಂತೆ ಭಕ್ತಿ ಘಟ; ಅರಿವೆ ವಸ್ತುಸ್ವರೂಪವಾಗಿ ಷಡಸ್ಥಲವನವಗವಿಸಿ ನಿಂದ ಸ್ವರೂಪ; ಬಸವಣ್ಣ ಚನ್ನಬಸವಣ್ಣ ಶರಣತತಿ ಮುಂತಾದ ಸಿದ್ಧಾಂತ ಉಭಯಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
Transliteration Bhakta māhēśvara prasādi ī trividha onde bīja; taleviḍiyilla. Prāṇaliṅgi śaraṇa aikya intī trividha ondē bīja; taleviḍiyilla. Vastu-vastukadante, śile-kāntiyante, kusuma-gandhadante, pati-satiyante bhakti ghaṭa; arive vastusvarūpavāgi ṣaḍasthalavanavagavisi ninda svarūpa; basavaṇṇa cannabasavaṇṇa śaraṇatati muntāda sid'dhānta ubhayasthala nirvāha. Śambhuvininditta svayambhuvinindatta atibaḷa nōḍā, mātuḷaṅga madhukēśvaranu.