•  
  •  
  •  
  •  
Index   ವಚನ - 33    Search  
 
ಕಾಷ್ಠವ ಕಾರ್ಮುಗಿಲು ನುಂಗಿತ್ತು ಹರಿವ ನೀರ ಉರಿ ಕುಡಿಯಿತ್ತು. ಬಡವ ಬಲ್ಲಿದನ ಕೊಂದು ಸತ್ತ ಠಾವಿನಲ್ಲಿ ಬಂಧುಗಳೆಲ್ಲರು ಕೂಡಿ ಎತ್ತುವರಿಲ್ಲದೆ ಅರೆವೆಣನಾಯಿತ್ತು. ಮುಕ್ತಿ ನಾಮ ನಷ್ಟ, ನಾರಾಯಣಪ್ರಿಯ ರಾಮನಾಥಾ, ಇನ್ನೇವೆನಿನ್ನೇವೆ!
Transliteration Kāṣṭhava kārmugilu nuṅgittu hariva nīra uri kuḍiyittu. Baḍava ballidana kondu satta ṭhāvinalli bandhugaḷellaru kūḍi ettuvarillade areveṇanāyittu. Mukti nāma naṣṭa, nārāyaṇapriya rāmanāthā, innēveninnēve!