•  
  •  
  •  
  •  
Index   ವಚನ - 34    Search  
 
ಕಾಳರಾತ್ರಿಯಲ್ಲಿ ಅಂಧಕಾರದ ಕೊಟ್ಟಿಗೆಯಲ್ಲಿ ಕಾಳೆಮ್ಮೆಯ ಕರು ಹಾಳವಾಗಿ ಹಾಳಿದ್ದ ದನಿಗಂಜೆ ಕೊಟ್ಟಿಗೆ ಹಾಳಾದುದಿಲ್ಲ. ಎತ್ತ ಕಟ್ಟುವುದಿಲ್ಲ ಎಮ್ಮೆಯಕರು ಸತ್ತಲ್ಲದೆ. ಕೊಟ್ಟಿಗೆ ಹಾಳಾಗದಯ್ಯಾ. ಕರುವಿನ ಕೊರಳೂ ಅಡಗದು. ಇನ್ನೇವೆನಿನ್ನೇವೆನಯ್ಯಾ, ನಾರಾಯಣಪ್ರಿಯ ರಾಮನಾಥಾ, ನೀನೇ ಗುರು ರೂಪಾಗಿ ಬಂದೆನ್ನ ಕರಸ್ಥಲವನಿಂಬು -ಗೊಳ್ಳಯ್ಯಾ.
Transliteration Kāḷarātriyalli andhakārada koṭṭigeyalli kāḷem'meya karu hāḷavāgi hāḷidda danigan̄je koṭṭige hāḷādudilla. Etta kaṭṭuvudilla em'meyakaru sattallade. Koṭṭige hāḷāgadayyā. Karuvina koraḷū aḍagadu. Innēveninnēvenayyā, nārāyaṇapriya rāmanāthā, nīnē guru rūpāgi bandenna karasthalavanimbu -goḷḷayyā.