•  
  •  
  •  
  •  
Index   ವಚನ - 35    Search  
 
ಕೀರ್ತಿಗೆ ಜಗವ ಕೊಂಡು ಮಾಡುವಾತ ಭಕ್ತನೆ? ನಿಂದಿಸಿಹರೆಂದು ಅಂಜಿಕೊಂಡಿಪ್ಪವ ತಪಸಿಯಲ್ಲ ; ಜಗವ ಮೆಚ್ಚಬೇಕೆಂದು ಮಾಡುವಾತ ಭಕ್ತನಲ್ಲ ; ಇಚ್ಛೆಗೆ ನುಡಿವವ ವಿರಕ್ತನಲ್ಲ. ಇದರಚ್ಚುಗ ನಿಮಗೇಕೆ? ನಾರಾಯಣಪ್ರಿಯ ರಾಮನಾಥ ಒಚ್ಚತ ನಿಮ್ಮನೊಲ್ಲ.
Transliteration Kīrtige jagava koṇḍu māḍuvāta bhaktane? Nindisiharendu an̄jikoṇḍippava tapasiyalla; jagava meccabēkendu māḍuvāta bhaktanalla; icchege nuḍivava viraktanalla. Idaraccuga nimagēke? Nārāyaṇapriya rāmanātha occata nim'manolla.