ಸಮಯಕ್ಕೆ ಹೋರಬೇಕು,
ಜ್ಞಾನದಲ್ಲಿ ಸುಮ್ಮನಿರಬೇಕು.
ಹೋರದಿದ್ದಡೆ ರುದ್ರಂಗೆ ದೂರ.
ಹೋರಿದಡೆ ಪರವಸ್ತುವಿಗೆ ದೂರ.
ಇದರಿಂದ ಬಂದುದು ಬರಲಿ.
ಮನೆಯೊಳಗಿದ್ದು ಮನೆಯ ಸುಟ್ಟರುಂಟೆ?
ನಾರಾಯಣಪ್ರಿಯ ರಾಮನಾಥಾ.
Transliteration Samayakke hōrabēku,
jñānadalli sum'manirabēku.
Hōradiddaḍe rudraṅge dūra.
Hōridaḍe paravastuvige dūra.
Idarinda bandudu barali.
Maneyoḷagiddu maneya suṭṭaruṇṭe?
Nārāyaṇapriya rāmanāthā.