ಸರ್ವಜ್ಞಾನ ಸಂಬಂಧಿಯ ಇರವು:
ಕಿರಣದೊಳಗಣ ಸುರಂಗದಂತೆ
ಸುರಭಿಯೊಳಗಣ ನವನೀತದಂತೆ
ಬೀಜದೊಳಗಣ ವೃಕ್ಷದಂತೆ
ಸಾಧಕರಲ್ಲಿ ತೋರುವ ಸಂಕಲ್ಪದಂತೆ
ಸಾತ್ವಿಕರಲ್ಲಿ ತೋರುವ ವಿಲಾಸಿತದಂತೆ
ಅಗ್ನಿಯಲ್ಲಿ ಹೊರಹೊಮ್ಮದ ತೆರವು
ಕೆಡದೆ ಉಡುಗಿ ತೋರುವ ಬೆಳಗಿನಂತೆ
ತೆರಹಿಲ್ಲದ ಭಾವ ವೇದಕ್ಕೆ ಅತೀತ, ಶಾಸ್ತ್ರಕ್ಕೆ ಅಗಮ್ಯ,
ಪುರಾಣಕ್ಕೆ ಆಗೋಚರ,
ಪುಣ್ಯದ ಪಟಲ ದಗ್ಧ, ನಾಮ ನಾಶ,
ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯವಾದ ಶರಣ.
Transliteration Sarvajñāna sambandhiya iravu:
Kiraṇadoḷagaṇa suraṅgadante
surabhiyoḷagaṇa navanītadante
bījadoḷagaṇa vr̥kṣadante
sādhakaralli tōruva saṅkalpadante
sātvikaralli tōruva vilāsitadante
agniyalli horahom'mada teravu
keḍade uḍugi tōruva beḷaginante
terahillada bhāva vēdakke atīta, śāstrakke agamya,
purāṇakke āgōcara,
puṇyada paṭala dagdha, nāma nāśa,
nārāyaṇapriya rāmanāthanalli aikyavāda śaraṇa.