ಕವಿ ಗಮಕಿ ವಾದಿ ವಾಗ್ಮಿಯೆಂಬ
ಮಾಯಾವೇಷ ಮತಕ್ಕೆ ದೂರ.
ಸಾಮುದ್ರಿಕರ ಶಬುದವು ನೆರೆಯವು.
ತಾರ್ಕಿಕರ ತರ್ಕಕ್ಕಿಲ್ಲ ಮತಿ ಮನುಗಳೆಂಬ
ಹಿರಿಯರರಿವಿನಲ್ಲಿ ನಿಲ್ಲು ನಿಲ್ಲು ಮಾಣು,
ಸಿಮ್ಮಲಿಗೆಯ ಚೆನ್ನರಾಮನೆಂಬ ಶಬುದವಿತ್ತುಗಳಿಗೆ.
Transliteration Kavi gamaki vādi vāgmiyemba
māyāvēṣa matakke dūra.
Sāmudrikara śabudavu nereyavu.
Tārkikara tarkakkilla mati manugaḷemba
hiriyararivinalli nillu nillu māṇu,
sim'maligeya cennarāmanemba śabudavittugaḷige.