ಅಲಗಿನ ಮೊನೆ ಆಯದಲ್ಲಿ ಬಿದ್ದ ಮತ್ತೆ
ನೆಲೆಗೊಳ್ಳಬಲ್ಲುದೆ ಪ್ರಾಣ?
ಅರಿದು ಮಾಡುವ ಮಾಟ ಅನುಸರಣೆಯಾದಲ್ಲಿ
ಅಲಗು ಜಾರಿ ಒರೆ ತಾಗಿದಂತೆ.
ಭಕ್ತಿ ಬರುದೊರೆ ಹೋಯಿತು
ಕಾಲಾಂತಕ ಭೀಮೇಶ್ವರಲಿಂಗಕ್ಕೆ ದೂರವಾಯಿತ್ತು.
Transliteration Alagina mone āyadalli bidda matte
nelegoḷḷaballude prāṇa?
Aridu māḍuva māṭa anusaraṇeyādalli
alagu jāri ore tāgidante.
Bhakti barudore hōyitu
kālāntaka bhīmēśvaraliṅgakke dūravāyittu.