ಉರಿಯ ಶ್ರೇಷ್ಠಕ್ಕೆ ವಾಯುವೆ ಪ್ರಾಣ,
ಉರಿಯ ನಂದಿಸುವುದಕ್ಕೆ ವಾಯುವೆ ಯಮ,
ಉಭಯವನರಿದು ಮರೆವುದಕ್ಕೆ ಆತ್ಮನೆ ಬೀಜ.
ಆತ್ಮನ ಆತ್ಮನನರಿವುದಕ್ಕೆ ಕಾಲಾಂತಕ
ಭೀಮೇಶ್ವರ ಲಿಂಗವೆ ಪ್ರಾಣ.
Transliteration Uriya śrēṣṭhakke vāyuve prāṇa,
uriya nandisuvudakke vāyuve yama,
ubhayavanaridu marevudakke ātmane bīja.
Ātmana ātmananarivudakke kālāntaka
bhīmēśvara liṅgave prāṇa.