•  
  •  
  •  
  •  
Index   ವಚನ - 3    Search  
 
ಅಪ್ಪು ತುಂಬಿದ ಕುಂಭದಲ್ಲಿ ಕಿಚ್ಚು ಹಾಕಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಆ ಅಪ್ಪುವ ಸುಟ್ಟುದುಂಟೆ ಕಿಚ್ಚು? ಆ ಕುಂಭದ ತಪ್ಪಲಿನಲ್ಲಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಕುಂಭದ ಲೆಪ್ಪದ ಮರೆಯಲ್ಲಿ ಅಪ್ಪುವ ಸುಡಬಲ್ಲುದೆ? ಇದು ಕಾರಣ ಕ್ರೀಯ ಮರೆಯಲ್ಲಿರ್ದ ನಿಃಕ್ರೀ ಶಿಲೆಯ ಮರೆಯಲ್ಲಿರ್ದ ನೆಲೆ ವಸ್ತುವ ಚಿತ್ತದ ಒಲವರದಿಂದ ಅರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವಲ್ಲಿ.
Transliteration Appu tumbida kumbhadalli kiccu hāki kaṭṭigeyanikki uruhalikke ā appuva suṭṭuduṇṭe kiccu? Ā kumbhada tappalinalli kaṭṭigeyanikki uruhalikke kumbhada leppada mareyalli appuva suḍaballude? Idu kāraṇa krīya mareyallirda niḥkrī śileya mareyallirda nele vastuva cittada olavaradinda ariyabēku cannabasavaṇṇapriya bhōgamallikārjunaliṅgavanarivalli.