•  
  •  
  •  
  •  
Index   ವಚನ - 94    Search  
 
ಷಡ್ದರ್ಶನಕ್ಕೆ ದೈವವೊಂದೆಂದಡೆ ವಾದಕ್ಕೆ ಮೂಲ ಹಲವೆಡೆಯೆಂದಡೆ ಸಮಯಕ್ಕೆ ದೂರ. ತಮ್ಮ ಒಲವರದಿಂದ ಕುಲದೈವ ಫಲಿಸುವಂತೆ ಏಕಛತ್ರವ ಕೊಟ್ಟು ರಾಣುವೆಗೆ ಹೊಲಬಿಗರ ಮಾಡಿದಂತೆ ದೇವನೊಬ್ಬ ತ್ರೈಮೂರ್ತಿಗಳಿಗೆ ಭೇದವ ಕೊಟ್ಟುಯಿಪ್ಪುದ ನಿಮ್ಮ ವೇದದ ಕಡೆಯಲ್ಲಿ ನೋಡಿಕೊಳ್ಳಿ. ಶಾಸ್ತ್ರದ ಸಂದನಿಯಲ್ಲಿ ಕಂಡುಕೊಳ್ಳಿ. ಪುರಾಣದ ಮೊದಲಪ್ರಸಂಗದಲ್ಲಿ ಸಂದೇಹವಿಡಿಸಿಕೊಳ್ಳಿ. ಆಗಮಂಗಳಲ್ಲಿ ತಿಳಿದು ನಾದಬಿಂದುಕಳೆಗೆ ಆತನಾರೆಂಬುದ ಕಂಡುಕೊಳ್ಳಿ. ಹದಿನೆಂಟುದೋಷಂಗಳಲ್ಲಿ ತ್ರಿವಿಧಮಲಂಗಳಲ್ಲಿ ತ್ರಿಜಾತಿ ವಂಶಭೇದದಲ್ಲಿ ತ್ರಿಗುಣಾತ್ಮಕನಾರೆಂಬುದ ತಿಳಿದು ಆದಿಯಿಂದಿತ್ತ ಅನಾದಿಯಿಂದತ್ತ ಲೀಲೆಯಿಂದಿತ್ತ ಸ್ವಯಂಭುವಿಂದತ್ತ ಈ ವಿಭೇದಕ್ಕೆ ಭೇದಕನಾರೆಂಬುದನರಿತು ಅಭೇದ್ಯವಸ್ತು ಭಕ್ತಿಕಾರಣದಿಂದ ವೇದ್ಯನಾಗಿ ಬಂದು ಜಗಹಿತಾರ್ಥವಾಗಿ ಬ್ರಹ್ಮಂಗೆ ಪ್ರಜಾಪತಿ ವಿಷ್ಣುವಿಂಗೆ ಯೋನಿ ಸಂಭವ, ರುದ್ರಂಗೆ ಬಿಂದು ಕಳೆಯಂ ಕೊಟ್ಟು ಮರೀಚಿಕ ಪ್ರಳಯರುದ್ರಂಗೆ ಸಂಹಾರವನಿತ್ತು ಇಂತಪ್ಪ ಭೇದದಲ್ಲಿ ವೇದ್ಯವಪ್ಪ ವಸ್ತುವ ನೋಡಿಕೊಳ್ಳಿ. ಇದರಿಂದ ವೆಗ್ಗಳವುಂಟೆಂದಡೆ ಸೋದಿಸಿಕೊಂಬ ಶತಸಹಸ್ರ ಅವತಾರಂಗಳಿಂದೀಚೆ ಆದ ದಶ ಅವತಾರಕ್ಕೆ ಒಳಗಾದವನ ತಪ್ಪಿಂದ ಶಿರಸ್ಸನ್ನು ಒಪ್ಪಗೆಡಿಸಿದವನ ಬೌದ್ಧನಾಗಿ ಭ್ರಮೆಯಿಂದ ನಾಣುಗೆಟ್ಟು ನಾಚಿಕೆಯಿಲ್ಲದವನ ತೊಡೆ, ಜಠರದಲ್ಲಿ ಮಡದಿಯರವೊಡಗೂಡಿಯಿಪ್ಪವನ ಇಂತೀ ಇವರನು ಅಡಿಗೆರಗಿಸಿಕೊಂಬ ಒಡೆಯ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾ.
Transliteration Ṣaḍdarśanakke daivavondendaḍe vādakke mūla halaveḍeyendaḍe samayakke dūra. Tam'ma olavaradinda kuladaiva phalisuvante ēkachatrava koṭṭu rāṇuvege holabigara māḍidante dēvanobba traimūrtigaḷige bhēdava koṭṭuyippuda nim'ma vēdada kaḍeyalli nōḍikoḷḷi. Śāstrada sandaniyalli kaṇḍukoḷḷi. Purāṇada modalaprasaṅgadalli sandēhaviḍisikoḷḷi. Āgamaṅgaḷalli tiḷidu nādabindukaḷege ātanārembuda kaṇḍukoḷḷi. Hadineṇṭudōṣaṅgaḷalli trividhamalaṅgaḷalli trijāti vanśabhēdadalli triguṇātmakanārembuda tiḷidu ādiyinditta anādiyindatta līleyinditta svayambhuvindatta ī vibhēdakke bhēdakanārembudanaritu abhēdyavastu bhaktikāraṇadinda vēdyanāgi bandu jagahitārthavāgi brahmaṅge prajāpati viṣṇuviṅge yōni sambhava, rudraṅge bindu kaḷeyaṁ koṭṭu Marīcika praḷayarudraṅge sanhāravanittu intappa bhēdadalli vēdyavappa vastuva nōḍikoḷḷi. Idarinda veggaḷavuṇṭendaḍe sōdisikomba śatasahasra avatāraṅgaḷindīce āda daśa avatārakke oḷagādavana tappinda śiras'sannu oppageḍisidavana baud'dhanāgi bhrameyinda nāṇugeṭṭu nācikeyilladavana toḍe, jaṭharadalli maḍadiyaravoḍagūḍiyippavana intī ivaranu aḍigeragisikomba oḍeya cannabasavaṇṇapriya bhōgamallikārjunaliṅgavalladillā. The Marichika Pralayadudram was devastating Keep the Vedavyappa object in the Iththappa bheda. This is why Own from centuries of avatars Dasha incarnate is the one who confessed his head by mistake Shameless as a Buddhist Wipe Now he is baking Channabasavanpriya Bhogamallikarjunalin