•  
  •  
  •  
  •  
Index   ವಚನ - 60    Search  
 
ನಾನಾ ಚಿತ್ರ ವಿಚಿತ್ರ, ನಾನಾ ದೃಷ್ಟವಿದ್ಯಂಗಳಲ್ಲಿ ಕಾಯಸಿದ್ಧಿ ಲೋಹಸಿದ್ಧಿ ಅಂಜನಸಿದ್ಧಿ ಒಳಗಾದ ಸಂದೇಹಸಿದ್ಧಿವುಳ್ಳವರುಂಟು. ಭಾವ ನಿರ್ಭಾವಸಿದ್ಧಿವಂತರನಾರನೂ ಕಾಣೆ. ಅವರು ಕಂಡಲ್ಲಿಯೆ ನಾನೆಂಬ ಪ್ರತಿರೂಪು, ಆ ಭಾವದಲ್ಲಿಯೆ ಲೇಪವಾಯಿತ್ತು, ಕಾಮಧೂಮ ಧೂಳೇಶ್ವರನೆಂಬುದು ಭಾವ ಲೇಪವಾದಲ್ಲಿ.
Transliteration Nānā citra vicitra, nānā dr̥ṣṭavidyaṅgaḷalli kāyasid'dhi lōhasid'dhi an̄janasid'dhi oḷagāda sandēhasid'dhivuḷḷavaruṇṭu. Bhāva nirbhāvasid'dhivantaranāranū kāṇe. Avaru kaṇḍalliye nānemba pratirūpu, ā bhāvadalliye lēpavāyittu, kāmadhūma dhūḷēśvaranembudu bhāva lēpavādalli.