•  
  •  
  •  
  •  
Index   ವಚನ - 61    Search  
 
ನಾನಾ ಜೀವದ ನೋವು ಒಂದೆಂದಲ್ಲಿ, ಮರಣಕ್ಕೆ ನಾನಾ ಭೇದಂಗಳುಂಟು. ಯೋನಿಯ ಕೂಟದ ಸುಖವೊಂದೆಂದಲ್ಲಿ, ಯೋಗ ನಾನಾ ಭೇದಂಗಳುಂಟು. ನಾನಾ ಸ್ಥಳಂಗಳ ಭೇದಿಸಿ, ವೇಧಿಸಿ, ಮೆಟ್ಟಿ ನೋಡಲಿಕ್ಕೆ ಇಂದ್ರಿಯಂಗಳಿಗೆ ಭಿನ್ನರೂಪಾಗಿ ತೋರುತ್ತಿಹವು. ಅದೇತರ ಗುಣವೆಂದು ನಿರಾಕರಿಸಿ ನೋಡಲಿಕ್ಕೆಅದಂತೆ ಇದ್ದಿತ್ತು. ಅಂತೆಯಿದ್ದ ಮೇಲೆ ಅಂತೆಯಿಂತೆಯೆನಲಿಲ್ಲ. ಆ ಗುಣ ಚಿಂತನೆಗೆ ಹೊರಗು, ಕಾಮಧೂಮ ಧೂಳೇಶ್ವರನು.
Transliteration Nānā jīvada nōvu ondendalli, maraṇakke nānā bhēdaṅgaḷuṇṭu. Yōniya kūṭada sukhavondendalli, yōga nānā bhēdaṅgaḷuṇṭu. Nānā sthaḷaṅgaḷa bhēdisi, vēdhisi, meṭṭi nōḍalikke indriyaṅgaḷige bhinnarūpāgi tōruttihavu. Adētara guṇavendu nirākarisi nōḍalikke'adante iddittu. Anteyidda mēle anteyinteyenalilla. Ā guṇa cintanege horagu, kāmadhūma dhūḷēśvaranu.