•  
  •  
  •  
  •  
Index   ವಚನ - 8    Search  
 
ಅಂಗಲಿಂಗ ಸಂಬಂಧ, ಭಾವಲಿಂಗ ಸಂಬಂಧ ,ಪ್ರಾಣಲಿಂಗ ಸಂಬಂಧವೆಂದು ಭಾವಿಸಬೇಕು, ಭಾವಿಸಬೇಡಾ ಎಂಬ ಉಭಯದ ತೆರನೆಂತುಟೆಂದಡೆ: ಮೃದುಕಠಿನವನರಿವನ್ನಕ್ಕ ಕುರುಹ ಮರೆಯಲಿಲ್ಲ. ಶೀತ ಉಷ್ಣಾದಿಗಳನರಿವನ್ನಕ್ಕ ಭಾವವ ಮರೆಯಲಿಲ್ಲ. ರೂಪು ನಿರೂಪೆಂಬ ದ್ವಯಂಗಳ ಭೇದಿಸುವನ್ನಕ್ಕ ಪ್ರಾಣಲಿಂಗವೆಂಬ ಉಭಯದ ಕುರುಹುಂಟು, ನಿಃಕಳಂಕ ಮಲ್ಲಿಕಾರ್ಜುನಾ.
Transliteration Aṅgaliṅga sambandha, bhāvaliṅga sambandha,prāṇaliṅga sambandhavendu bhāvisabēku, bhāvisabēḍā emba ubhayada teranentuṭendaḍe: Mr̥dukaṭhinavanarivannakka kuruha mareyalilla. Śīta uṣṇādigaḷanarivannakka bhāvava mareyalilla. Rūpu nirūpemba dvayaṅgaḷa bhēdisuvannakka prāṇaliṅgavemba ubhayada kuruhuṇṭu, niḥkaḷaṅka mallikārjunā.