ಅಂಗವಿರಲಾಗಿ ಲಿಂಗವೆಂಬುದೊಂದು ಕುರುಹು.
ಆ ಕುರುಹನರಿವುದಕ್ಕೆ ಅರಿವೆಂಬುದೊಂದು ಭಾವ.
ಭಾವದ ಮರೆಯಲ್ಲಿ ಚಿತ್ತ, ಚಿತ್ತದ ಮರೆಯಲ್ಲಿ ನಿಶ್ಚಯ,
ನಿಜವನೆಯ್ದಿದಲ್ಲಿ ವಸ್ತುಭಾವಲೇಪ.
ಅದು ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Aṅgaviralāgi liṅgavembudondu kuruhu.
Ā kuruhanarivudakke arivembudondu bhāva.
Bhāvada mareyalli citta, cittada mareyalli niścaya,
nijavaneydidalli vastubhāvalēpa.
Adu prāṇaliṅgasambandha, niḥkaḷaṅka mallikārjunā.