•  
  •  
  •  
  •  
Index   ವಚನ - 148    Search  
 
ಉರಿಯೊಳಗಣ ಶೈತ್ಯದಂತೆ, ಶೈತ್ಯದೊಳಗಣ ಉರಿಯಂತೆ, ಅರಿದು ಅರುಹಿಸಿಕೊಂಬುದೇನು ಹೇಳಾ ? ಅದು ಚಂದ್ರನೊಳಗಣ ಕಲೆ, ತನ್ನಂಗದ ಕಳೆಯಿಂದ ಉಭಯದೃಷ್ಟವ ಕಾಣಿಸಿಕೊಂಬಂತೆ, ಆ ಇಷ್ಟದ ದೃಷ್ಯದ ಕಾಣಿಸಿಕೊಂಡಂತೆ, ಅರಿವುದು, ಅರುಹಿಸಿಕೊಂಬುದು ಒಡಗೂಡಿದಲ್ಲಿ ಶರಣ ಸ್ಥಲ. ಆ ಸಂಬಂಧಸಮಯ ನಿಂದಲ್ಲಿ ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Uriyoḷagaṇa śaityadante, śaityadoḷagaṇa uriyante, aridu aruhisikombudēnu hēḷā? Adu candranoḷagaṇa kale, tannaṅgada kaḷeyinda ubhayadr̥ṣṭava kāṇisikombante, ā iṣṭada dr̥ṣyada kāṇisikoṇḍante, arivudu, aruhisikombudu oḍagūḍidalli śaraṇa sthala. Ā sambandhasamaya nindalli aikyānubhāva, niḥkaḷaṅka mallikārjunā.