•  
  •  
  •  
  •  
Index   ವಚನ - 416    Search  
 
ದೇಹದ ಕಲೆಯನರಿವನ್ನಬರ ಇಷ್ಟಲಿಂಗ ಸಂಬಂಧಿಯಲ್ಲ. ಭಾವದ ಭ್ರಮೆ ಉಳ್ಳನ್ನಕ್ಕ ಭಾವಲಿಂಗ ಸಂಬಂಧಿಯಲ್ಲ. ಪ್ರಾಣ ಪ್ರಳಯವನರಿವನ್ನಬರ ಪ್ರಾಣಲಿಂಗ ಸಂಬಂಧಿಯಲ್ಲ. ಭಾವ ಇಷ್ಟದಲ್ಲಿ ನಿಂದು, ಇಷ್ಟಕ್ಕೆ ಭಾವ ಚೇತನವಾಗಿ ರಜ್ಜು ತೈಲವ ಅಗ್ನಿಗೆ ಛೇದಿಸಿಕೊಡುವಂತೆ, ಇಷ್ಟಭಾವದ ಸತ್ವ, ಆ ಉಭಯನಾಧರಿಸಿ ನಿಂದ ಒಡಲು ಸದ್ಭಾವವಂತನ ಕ್ರೀ. ಈ ಮೂರು ಏಕವಾಗಿ ವೇಧಿಸಿ, ಉದಯಿಸಿ ತೋರುವ ಬೆಳಗು, ಆ ಕಳೆಯನೊಳಕೊಂಡಲ್ಲಿ, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Dēhada kaleyanarivannabara iṣṭaliṅga sambandhiyalla. Bhāvada bhrame uḷḷannakka bhāvaliṅga sambandhiyalla. Prāṇa praḷayavanarivannabara prāṇaliṅga sambandhiyalla. Bhāva iṣṭadalli nindu, iṣṭakke bhāva cētanavāgi rajju tailava agnige chēdisikoḍuvante, iṣṭabhāvada satva, ā ubhayanādharisi ninda oḍalu sadbhāvavantana krī. Ī mūru ēkavāgi vēdhisi, udayisi tōruva beḷagu, ā kaḷeyanoḷakoṇḍalli, prāṇaliṅgasambandha, niḥkaḷaṅka mallikārjunā.