ವಿರಕ್ತಿಯ ಹೇಳಿ ಹರಿದಾಡುವ ಹಿರಿಯರೆಲ್ಲರೂ
ಕರಸ್ಥಲದಲ್ಲಿ ಲಿಂಗವ ಹಿಡಿದು,
ಎರವಿನ ದ್ರವ್ಯ ಸ್ಥಿರವಲ್ಲವೆಂದು ಹೇಳಿ,
ಅವರು ಕೊಡುವುದಕ್ಕೆ ಮೊದಲೆ,
ತಾವು ಕೈಯಾಂತ ಬರುಕಪಿಗಳ ನೋಡಿ ಬೆರಗಾದೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Viraktiya hēḷi haridāḍuva hiriyarellarū
karasthaladalli liṅgava hiḍidu,
eravina dravya sthiravallavendu hēḷi,
avaru koḍuvudakke modale,
tāvu kaiyānta barukapigaḷa nōḍi beragāde,
niḥkaḷaṅka mallikārjunā.