ಹೀಗಿರು ಎಂದಡೆ, ಹಾಗಿರದಿದ್ದಡೆ ಅವಳು ಸತಿಯಲ್ಲ, ನಾ ಪತಿಯಲ್ಲ.
ಆವ ಠಾವಿನಲ್ಲಿ ಎನಗೆ ಸತಿ ಸಂಗ? ಆವ ಠಾವಿನಲ್ಲಿ ಲಜ್ಜೆ ನಾಚಿಕೆ?
ಕೇಣಸರ ಅಪಮಾನವಿಲ್ಲದಿರಬೇಕು, ಅದು ಎನ್ನ ಭಕ್ತಿ ಮುಕ್ತಿಯ ಬೆಳೆ.
ಸತಿಪತಿಯಿಬ್ಬರೂ ಏಕವಾದಲ್ಲಿ
ನಿಃಕಳಂಕ ಮಲ್ಲಿಕಾರ್ಜುನ ಹೆಡೆಗುಡಿಗೊಳಗಾದನು.
Transliteration Hīgiru endaḍe, hāgiradiddaḍe avaḷu satiyalla, nā patiyalla.
Āva ṭhāvinalli enage sati saṅga? Āva ṭhāvinalli lajje nācike?
Kēṇasara apamānavilladirabēku, adu enna bhakti muktiya beḷe.
Satipatiyibbarū ēkavādalli
niḥkaḷaṅka mallikārjuna heḍeguḍigoḷagādanu.