•  
  •  
  •  
  •  
Index   ವಚನ - 788    Search  
 
ಹುಟ್ಟದ ಮುನ್ನವೆ ಸತ್ತಿತ್ತು ಆ ಶಿಶು. ಸಾವುದಕ್ಕೆ ಮುನ್ನವೆ ಹುಟ್ಟಿದ ಶಿಶುವ ನೋಡಾ, ಅಯ್ಯಾ. ಉಭಯದ ಮಧ್ಯದಲ್ಲಿ ನಿಂದು, ಸತ್ತು ಹುಟ್ಟಿದವರಾರೋ, ಹುಟ್ಟಿ ಸತ್ತವರಾರೋ? ಉಭಯವೇನೆಂಬುದನರಿಯದೆ, ಭಾವಭ್ರಮೆಯಿಂದ ನಾವು ಪ್ರಾಣಲಿಂಗಿಗಳೆಂದು ನುಡಿವುತ್ತಿಪ್ಪರ ಕಂಡು, ನಾಚಿಕೆಯಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
Transliteration Huṭṭada munnave sattittu ā śiśu. Sāvudakke munnave huṭṭida śiśuva nōḍā, ayyā. Ubhayada madhyadalli nindu, sattu huṭṭidavarārō, huṭṭi sattavarārō? Ubhayavēnembudanariyade, bhāvabhrameyinda nāvu prāṇaliṅgigaḷendu nuḍivuttippara kaṇḍu, nācikeyāyittu, niḥkaḷaṅka mallikārjunā.