ಹೊಟ್ಟೆಯ ಕಕ್ಕುಲತೆಗಾಗಿ,
ಭಕ್ತರ ಮನೆಯ ಹೊಕ್ಕು ಸೇವೆಯ ಮಾಡುವ
ಮಿಟ್ಟೆಯಭಂಡರಿಗೆಲ್ಲಿಯದೊ ನೆಟ್ಟನೆ ದೇವತ್ವ?
ಈ ಕಷ್ಟ ಜೀವನ ನೆಟ್ಟನೆ ಕಂಡಡೆ, ಬಟ್ಟೆಯ ಬಿಡಬೇಕು,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script)Hoṭṭeya kakkulategāgi,
bhaktara maneya hokku sēveya māḍuva
miṭṭeyabhaṇḍarigelliyado neṭṭane dēvatva?
Ī kaṣṭa jīvana neṭṭane kaṇḍaḍe, baṭṭeya biḍabēku,
niḥkaḷaṅka mallikārjunā.
Read More
ವಚನಕಾರ ಮಾಹಿತಿ
ಮೋಳಿಗೆ ಮಾರಯ್ಯ
ಅಂಕಿತನಾಮ:
ನಿ:ಕಳಂಕ ಮಲ್ಲಿಕಾರ್ಜುನ
ವಚನಗಳು:
815
ಕಾಲ:
12ನೆಯ ಶತಮಾನ
ಕಾಯಕ:
ಮಹಾರಾಜ-ಕಾಡಿನಿಂದ ಉರುವಲು ಕಟ್ಟಿಗೆ ತಂದು ಊರೊಳಗೆ ಮಾರುವುದು.