ನಾಟ್ಯಸಾಲೆಯೊಳು ನಾಟ್ಯವನಾಡುವ ಹೆಣ್ಣು
ಝಣಝಣ ಕಿಣಿಕಿಣಿಯೆಂದರೆ
ಮುಸುರೆಯ ಮಡಕೆಯನು ತೊಳವುತ್ತ
ಮೂಕೊರೆಯ ತೊತ್ತು ಗುಣುಗುಣುಯೆಂಬಂತೆ,
ನವಿಲಾಡಿತೆಂದು ನಾಯಿ ಬಾಲವ ಬಡಕೊಂಬಂತೆ,
ಕೋಗಿಲೆ ಕೂಗಿತ್ತೆಂದು ಕುಕ್ಕುಟ ಪುಚ್ಚವ ತರಕೊಂಡಂತೆ,
ನಿಶ್ಚಯವಿಲ್ಲದವನ ಭಕ್ತಿ ಬಚ್ಚಲಬಾಲ್ವುಳುವಿನಂತೆ ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು
ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
Transliteration Nāṭyasāleyoḷu nāṭyavanāḍuva heṇṇu
jhaṇajhaṇa kiṇikiṇiyendare
musureya maḍakeyanu toḷavutta
mūkoreya tottu guṇuguṇuyembante,
navilāḍitendu nāyi bālava baḍakombante,
kōgile kūgittendu kukkuṭa puccava tarakoṇḍante,
niścayavilladavana bhakti baccalabālvuḷuvinante kāṇā
akhaṇḍa paripūrṇa ghanaliṅgaguru
cennabasavēśvara śivasākṣiyāgi.