ಉತ್ತರ ದಕ್ಷಿಣ ಪೂರ್ವ ಪಶ್ಚಿಮವೆಂಬ
ನಾಲ್ಕು ದೇಶವ ತಿರುಗಿದಡೆ,
ಅಷ್ಟಾಷಷ್ಠಿಕೋಟಿ ತೀರ್ಥಂಗಳಲ್ಲಿ ಸ್ನಾನವ ಮಾಡಿದಡೆ,
ಸಂಸಾರವೆಂಬ ದ್ರುಮ ನಾಶವಾಗುವದೆಂಬರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Uttara dakṣiṇa pūrva paścimavemba
nālku dēśava tirugidaḍe,
aṣṭāṣaṣṭhikōṭi tīrthaṅgaḷalli snānava māḍidaḍe,
sansāravemba druma nāśavāguvadembaru nōḍā
apramāṇakūḍalasaṅgamadēvā.