ಕಂಥೆಯೊಳಗಣ ಕಪ್ಪ[ಡ]ವ ಹರಿದಲ್ಲದೆ ಕಾಯವಂಚಕನಲ್ಲ,
ಕಟ್ಟಿಗೆಯೊಳಗಣ ಗಣ್ಣ ಮುರಿದಲ್ಲದೆ ಕರ್ಮರಹಿತನಲ್ಲ,
ಕಪ್ಪರದೊಳಗಣ ಆಪ್ಯಾಯನವನೊಡದಲ್ಲದೆ ಜೀವಭಾವಕನಲ್ಲ,
ಕಣ್ಣೊಳಗಣ ಕಾಳಿಕೆ ಹಿಂಗಿಯಲ್ಲದೆ ಜ್ಞಾನಭಾವುಕನಲ್ಲ,
ಮಾಯೆಯೊಳಗಣ ಕಂಥೆಯ ಹರಿದು,
ಕಾಯದೊಳಗಿನ ಕಟ್ಟಿಗೆಯ ಮುರಿದು,
ಮನದೊಳಗಣ ಕಪ್ಪರವನೊಡೆದು, ಸೂಸಿ ಸುಳಿದಾಡುವ ಕಣ್ಣ ಕಿತ್ತು,
ನಿಶ್ಚಯದ ನಿಜದಲ್ಲಿ ಚರಿಸುವ ಜ್ಞಾನ ಜಂಗಮಕ್ಕೆ ನಮೋ ನಮೋ ಎಂಬೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Kantheyoḷagaṇa kappa[ḍa]va haridallade kāyavan̄cakanalla,
kaṭṭigeyoḷagaṇa gaṇṇa muridallade karmarahitanalla,
kapparadoḷagaṇa āpyāyanavanoḍadallade jīvabhāvakanalla,
kaṇṇoḷagaṇa kāḷike hiṅgiyallade jñānabhāvukanalla,
māyeyoḷagaṇa kantheya haridu,
kāyadoḷagina kaṭṭigeya muridu,
manadoḷagaṇa kapparavanoḍedu, sūsi suḷidāḍuva kaṇṇa kittu,
niścayada nijadalli carisuva jñāna jaṅgamakke namō namō embe,
niḥkaḷaṅka mallikārjunā.
Read More