ನೀರ ಹೊಳೆಯಲ್ಲಿ ಹೋಗುತ್ತಿರಲಾಗಿ, ಅಲ್ಲಿ ಒಬ್ಬ ಸತ್ತು, ಬೇವುತ್ತಿರ್ದ.
ತಲೆ ಕಾಲು ಬೇಯದು, ಕೈ ಮುರುಟದು,
ಕಪಾಲ ಸಿಡಿಯದು, ಕೂದಲು ಉಳಿಯಿತ್ತು.
ಆ ಕೂದಲ ಮೊನೆಯಲ್ಲಿ ಮೂರು ಲೋಕ ಎಡೆಯಾಡುತ್ತದೆ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration Nīra hoḷeyalli hōguttiralāgi, alli obba sattu, bēvuttirda.
Tale kālu bēyadu, kai muruṭadu,
kapāla siḍiyadu, kūdalu uḷiyittu.
Ā kūdala moneyalli mūru lōka eḍeyāḍuttade,
niḥkaḷaṅka mallikārjunā.