ಪ್ರಾಣಲಿಂಗಸಂಬಂಧಿಗಳೆಂಬ ಭಾವದಭ್ರಮೆಯಿಂದ
ಬಳಲುತ್ತಿಪ್ಪ
ಜ್ಞಾನಿಗಳು,
ನೀವು ಕೇಳಿರೋ, ಲಿಂಗಪ್ರಾಣವೋ ? ಪ್ರಾಣಲಿಂಗವೋ ?
ಸಂಗದ ಗುಣವೋ ? ಎಂಬುದನರಿದಾಗವೆ,
ಲಿಂಗ ಅಂಗ, ಅಂಗ ಲಿಂಗ ಉಭಯದ ಸಂದ ಹರಿದಾಗವೆ ಪ್ರಾಣಲಿಂಗ.
ಪ್ರಾಣನ ಪ್ರಕೃತಿಯ ಭಾವಿಸದಿದ್ದಾಗವೆ, ಪರಮಪ್ರಕಾಶ.
ಇಷ್ಟರಿಂದ ನಾನರಿಯೆ, ನೀನಾಡಿಸುವ ಬೊಂಬೆ ನಾನು.
ನನ್ನ ಭಾವದ ಭ್ರಮೆಯ ಬಿಡಿಸಿ, ನಿರ್ಭಾವಕ್ಕೆ ನೆಲೆಗೊಳ್ಳಯ್ಯಾ,
ನಿಃಕಳಂಕ ಮಲ್ಲಿಕಾರ್ಜುನಾ.
Transliteration (Vachana in Roman Script) Prāṇaliṅgasambandhigaḷemba bhāvadabhrameyinda
baḷaluttippa
jñānigaḷu,
nīvu kēḷirō, liṅgaprāṇavō? Prāṇaliṅgavō?
Saṅgada guṇavō? Embudanaridāgave,
liṅga aṅga, aṅga liṅga ubhayada sanda haridāgave prāṇaliṅga.
Prāṇana prakr̥tiya bhāvisadiddāgave, paramaprakāśa.
Iṣṭarinda nānariye, nīnāḍisuva bombe nānu.
Nanna bhāvada bhrameya biḍisi, nirbhāvakke nelegoḷḷayyā,
niḥkaḷaṅka mallikārjunā.
Read More