ಮಹಾಮುಗಿಲಿನ ಮರೆಯ ವರುಣನ ಕಿರಣದಂತೆ,
ಮಹಾನಿರ್ಮಲ ಶಿಲೆಯ ಮರೆಯಲ್ಲಿ ಬೆಳಗುವ ದೀಪ್ತಿಯಂತೆ,
ಮಹಾಸುಕ್ಷೇತ್ರ ವಾಸದ ವಾಳುಕದ ಮರೆಯ ಅಪ್ಪುವಿನಂತೆ,
ಇಂತೀ ದೃಷ್ಟದ ಇಷ್ಟದ ಮರೆಯಲ್ಲಿ ನಿಶ್ಚಯವ ನಿಶ್ಚಯಿಸಿದಲ್ಲಿ,
ಪ್ರಾಣಲಿಂಗಸಂಬಂಧಿ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Mahāmugilina mareya varuṇana kiraṇadante,
mahānirmala śileya mareyalli beḷaguva dīptiyante,
mahāsukṣētra vāsada vāḷukada mareya appuvinante,
intī dr̥ṣṭada iṣṭada mareyalli niścayava niścayisidalli,
prāṇaliṅgasambandhi, niḥkaḷaṅka mallikārjunā.