•  
  •  
  •  
  •  
Index   ವಚನ - 700    Search  
 
ವಾರುವ ಮುಗ್ಗಿದಡೆ ವಾಗೆದಲ್ಲಿ ಆದರಿಸಬೇಕಲ್ಲದೆ, ಅದ ಗಾರುಮಾಡಿ ಹೊಯ್ವರೆ ಮಿಡಿಯನು ? ಮಾರಾರಿಯ ಶರಣರು ಮೀರಿ ಒಂದು ನುಡಿದಡೆ, ದೂರು ಮಾಡುವರೆ ? ನೀರರದ ಅಡಿಯೊಳಗಾದವನ ಸೂರೆಗೊಂಬವರುಂಟೆ ? ಲೇಸ ತೋರುವರಯ್ಯಾ ಐದರ ಬೇಗೆಯಲಿ ಬೆಂದು ಗಾರಾದೆ, ನಿಃಕಳಂಕ ಮಲ್ಲಿಕಾರ್ಜುನಾ.
Transliteration Vāruva muggidaḍe vāgedalli ādarisabēkallade, ada gārumāḍi hoyvare miḍiyanu? Mārāriya śaraṇaru mīri ondu nuḍidaḍe, dūru māḍuvare? Nīrarada aḍiyoḷagādavana sūregombavaruṇṭe? Lēsa tōruvarayyā aidara bēgeyali bendu gārāde, niḥkaḷaṅka mallikārjunā.