ಜಾವ ಘಳಿಗೆಯ ನೇಮದ ಪೂಜೆಯ ನೇಮಕರೆಲ್ಲ,
ಫಲದಾಯಕರಾಗಿ ಹೋದರು.
ಲಿಂಗಭಕ್ತ ಕಾಲ ನೇಮದ ಪೂಜಾ ಫಲದಾಯಕನೆ ಅಲ್ಲಲ್ಲ.
ಲಿಂಗಭಕ್ತ ಮಾಡುವ ಪೂಜೆ ನಿರ್ಮಲ್ಯವಾಗದು,
ತಾ ಸಹಿತ ಲಿಂಗಕ್ಕೆ ಪೂಜೆಯಹನಾಗಿ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ನಿಜಭಕ್ತ ಮಾಡುವ ಪೂಜೆಯ ಕ್ರಮವಿದು.
Transliteration Jāva ghaḷigeya nēmada pūjeya nēmakarella,
phaladāyakarāgi hōdaru.
Liṅgabhakta kāla nēmada pūjā phaladāyakane allalla.
Liṅgabhakta māḍuva pūje nirmalyavāgadu,
tā sahita liṅgakke pūjeyahanāgi.
Nijaguru svatantrasid'dhaliṅgēśvarā,
nim'ma nijabhakta māḍuva pūjeya kramavidu.