ಕರ್ಣಂಗಳು ಕೇಳಿದ ಶಬ್ದದಿಂದಾದ ಸುಖವನು,
ನೇತ್ರಂಗಳು ನೋಡಿದ ರೂಪಿನಿಂದಾದ ಸುಖವನು,
ರಸನೆ ಸವಿದ ರಸದಿಂದಾದ ಸುಖವನು,
ವಾಸಿಸುವ ಘ್ರಾಣದಿಂದರಿವ ಗಂಧಸುಖವನು,
ಮುಟ್ಟುವ ತ್ವಕ್ಕಿನಿಂದಾದ ಸ್ಪರ್ಶಸುಖವನು,
ಅರ್ಪಿತವ ಮಾಡಿ ಅನುಭವಿಸುವನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಪ್ರಸಾದಿಯು.
Transliteration Karṇaṅgaḷu kēḷida śabdadindāda sukhavanu,
nētraṅgaḷu nōḍida rūpinindāda sukhavanu,
rasane savida rasadindāda sukhavanu,
vāsisuva ghrāṇadindariva gandhasukhavanu,
muṭṭuva tvakkinindāda sparśasukhavanu,
arpitava māḍi anubhavisuvanu,
nijaguru svatantrasid'dhaliṅgēśvarana prasādiyu.