ಕದಳಿಯ ಬನದೊಳಗಿರುವ ಲಿಂಗವ
ಅರಸಿದಡೆ ಕಾಣಬಾರದು.
ನೋಡಿದಡೆ ನೋಟಕ್ಕಿಲ್ಲ, ಹಿಡಿದಡೆ ಹಸ್ತಕ್ಕಿಲ್ಲ,
ನೆನೆದಡೆ ಮನಕ್ಕಗೋಚರ.
ಇಂತು ಮಹಾಘನವ ಹೃದಯದಲ್ಲಿ ನೆಲೆಗೊಳಿಸಿದ ಶರಣರ
ಕಂಗಳಲ್ಲಿ ಹೆರೆಹಿಂಗದೆ ನೋಡಿ,
ಅವರಂಘ್ರಿಯಲ್ಲಿ ಐಕ್ಯವಾದೆನಯ್ಯಾ,
ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
Transliteration Kadaḷiya banadoḷagiruva liṅgava
arasidaḍe kāṇabāradu.
Nōḍidaḍe nōṭakkilla, hiḍidaḍe hastakkilla,
nenedaḍe manakkagōcara.
Intu mahāghanava hr̥dayadalli nelegoḷisida śaraṇara
kaṅgaḷalli herehiṅgade nōḍi,
avaraṅghriyalli aikyavādenayyā,
appaṇṇapriya cennabasavaṇṇā.