•  
  •  
  •  
  •  
Index   ವಚನ - 248    Search  
 
ಶಿವಾಚಾರಸಂಪನ್ನನಾಗಿ ಶಿವಭಕ್ತನೆನಿಸಿಕೊಂಡು ಶಿವಲಿಂಗವು ಕರಸ್ಥಲ ಉರಸ್ಥಲ ಶಿರಸ್ಥಲದಲ್ಲಿರುತಿರೆ ಅದ ಮರೆದು, ಹಲವು ದೇವರ ಪೂಜೆಮಾಡಿ, ಹಲವು ದೇವರ ಬಳಿಯಲ್ಲಿ ನೀರ ಕುಡಿದು, ಹಲವು ದೇವರ ನೈವೇದ್ಯವ ತಿಂಬ ಹೊಲೆಯನ ಶಿವಭಕ್ತನೆನಬಹುದೆ? ಎನಲಾಗದು. ಅದೇನು ಕಾರಣವೆಂದಡೆ, ಅದಕ್ಕೆ ಸಾಕ್ಷಿ: ಶಿವಾಚಾರೇಣ ಸಂಪನ್ನಃ ಪ್ರಸಾದಂ ಭುಂಜತೇ ಯದಿ | ಅಪ್ರಸಾದೀ ಅನಾಚಾರೀ ಸರ್ವಭಕ್ತಶ್ಚ ವಾಯಸಃ ||'' ಎಂಬುದನರಿಯದೆ, ಮತ್ತೆ ಕೇಳು ಗ್ರಂಥ ಸಾಕ್ಷಿಯ ಮನುಜ : ಸಾಕ್ಷಿ: “ಲಿಂಗಾರ್ಚನೈಕ ಪರಾಣಾಂ ಅನ್ಯದೈವಂತು ಪೂಜನಂ | ಶ್ವಾನಯೋನಿಶತಂ ಗತ್ವಾ ರೌರವಂ ನರಕಂ ವ್ರಜೇತ್ ||'' ಎಂಬುದನರಿಯದೆ, ಮತ್ತೆ ಮೇಣ್, ಸಾಕ್ಷಿ: “ಶಿವಲಿಂಗಂ ಪರಿತ್ಯಜ್ಯ ಅನ್ಯದೈವಮುಪಾಸತೇ | ಪ್ರಸಾದಂ ನಿಷ್ಫಲಂ ಚೈವ ರೌರವಂ ನರಕಂ ವ್ರಜೇತ್ ||'' ಹೀಗೆಂಬುದನರಿಯದೆ, ಲಿಂಗವಿದ್ದು ಅನ್ಯದೈವಂಗಳಿಗೆರಗಿ, ಆಚಾರಭ್ರಷ್ಟನಾಗಿ ಪಾದೋದಕ ಪ್ರಸಾದವ ಕೊಂಡರೆ ಎಂದೆಂದಿಗೂ ಭವಹಿಂಗದು. ಅದೇನುಕಾರಣ ಹಿಂಗದೆಂದರೆ ಹೇಳುವೆ ಕೇಳಿರಣ್ಣಾ: ಹೆಗ್ಗಣವನೊಳ ಹೋಗಿಸಿ ನೆಲಗಟ್ಟ ಹೊರೆದಂತೆ, ಅನ್ಯಕೆ ಹರಿವ ದುರ್ಗುಣವ ಕೆಡೆಮೆಟ್ಟದೆ ಶಿವಭಕ್ತರೆಂದೆಂದು ನುಡಿದುಕೊಂಡು ನಡೆದರೆ, ಹಂದಿ ನಾಯಿ ನರಿ ವಾಯಸನ ಜನ್ಮ ತಪ್ಪದೆಂದಾತ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Śivācārasampannanāgi śivabhaktanenisikoṇḍu śivaliṅgavu karasthala urasthala śirasthaladallirutire ada maredu, halavu dēvara pūjemāḍi, halavu dēvara baḷiyalli nīra kuḍidu, halavu dēvara naivēdyava timba holeyana śivabhaktanenabahude? Enalāgadu. Adēnu kāraṇavendaḍe, adakke sākṣi: Śivācārēṇa sampannaḥ prasādaṁ bhun̄jatē yadi | aprasādī anācārī sarvabhaktaśca vāyasaḥ ||'' embudanariyade, matte kēḷu grantha sākṣiya manuja: Sākṣi:“Liṅgārcanaika parāṇāṁ an'yadaivantu pūjanaṁ | śvānayōniśataṁ gatvā rauravaṁ narakaṁ vrajēt ||'' embudanariyade, matte mēṇ, sākṣi: “Śivaliṅgaṁ parityajya an'yadaivamupāsatē | prasādaṁ niṣphalaṁ caiva rauravaṁ narakaṁ vrajēt ||'' hīgembudanariyade, liṅgaviddu an'yadaivaṅgaḷigeragi, ācārabhraṣṭanāgi pādōdaka prasādava koṇḍare endendigū bhavahiṅgadu.Adēnukāraṇa hiṅgadendare hēḷuve kēḷiraṇṇā: Heggaṇavanoḷa hōgisi nelagaṭṭa horedante, an'yake hariva durguṇava keḍemeṭṭade śivabhaktarendendu nuḍidukoṇḍu naḍedare, handi nāyi nari vāyasana janma tappadendāta nam'ma paramaguru paḍuviḍi sid'dhamallināthaprabhuve.