ಮಾಹೇಶ್ವರಂಗೆ ಅಪ್ಪುವೆ ಅಂಗ.
ಆ ಅಂಗಕ್ಕೆ ಸುಬುದ್ಧಿಯೆಂಬ ಹಸ್ತ. ಆ ಹಸ್ತ್ಕಕೆ ಕರ್ತೃಸಾದಾಖ್ಯ,
ಆ ಸಾದಾಖ್ಯಕ್ಕೆ ಜ್ಞಾನಶಕ್ತಿ, ಆ ಶಕ್ತಿಗೆ ಗುರುಲಿಂಗ,
ಆ ಲಿಂಗಕ್ಕೆ ಪ್ರತಿಷ್ಠಾ ಕಲೆ.
ಆ ಕಲೆಗೆ ಜಿಹ್ಮೇಂದ್ರಿಯವೆ ಮುಖ.
ಆ ಮುಖಕ್ಕೆ ಸುರಸ ಪದಾರ್ಥ.
ಆ ಪದಾರ್ಥವನು ರೂಪು ರುಚಿ ತೃಪ್ತಿಯನರಿದು
‘ಮ’ಕಾರ ಮಂತ್ರಯುಕ್ತವಾಗಿ ನೈಷ್ಠಿಕಾ ಭಕ್ತಿಯಿಂದರ್ಪಿಸಿ
ಆ ಸುರಸ ಪ್ರಸಾದವನು ಭೋಗಿಸಿ
ಸುಖಿಸುತ್ತ ಇಹನಯ್ಯ ಮಾಹೇಶ್ವರನು
ಶಾಂತವೀರೇಶ್ವರಾ
Transliteration Māhēśvaraṅge appuve aṅga.
Ā aṅgakke subud'dhiyemba hasta. Ā hastkake kartr̥sādākhya,
ā sādākhyakke jñānaśakti, ā śaktige guruliṅga,
ā liṅgakke pratiṣṭhā kale.
Ā kalege jihmēndriyave mukha.
Ā mukhakke surasa padārtha.
Ā padārthavanu rūpu ruci tr̥ptiyanaridu
‘ma’kāra mantrayuktavāgi naiṣṭhikā bhaktiyindarpisi
ā surasa prasādavanu bhōgisi
sukhisutta ihanayya māhēśvaranu
śāntavīrēśvarā